ರಾಜಶ್ರೀ ಯವರು ತುಳು ಭಾಷೆ, ಸಂಸ್ಕೃತಿಯ ಅಧ್ಯಯನ ಕಾರರು, ಸಂಶೋಧಕಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. == ಹುಟ್ಟು == ಪೆರಿಮೊಗರು ಪಟೀಲ್ ರಘುನಾಥ ಶೆಟ್ಟಿ ಹಾಗೂ ಮೊಗರೋಡಿ ಸುನಂದಾ ಆರ್. ಶೆಟ್ಟಿ ಯವರ ಮಗಳಾಗಿ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದಲ್ಲಿ ೧೦.೦೯.೧೯೬೬ ರಲ್ಲಿ ಹುಟ್ಟಿದರು. == ಉದ್ಯೋಗ == ಉಪನ್ಯಾಸಕಿ ವೃತ್ತಿ ಜೀವನ ಪುತ್ತೂರಿನ ವಿವೇಕಾನಂದ ಕಾಲೇಜು. ಶ್ರಿ.ಡಿ.ಎಂ. ತುಳುಪೀಠ,ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕಿಯಾಗಿ, ಹಾಗೂಅಥಿತಿ ಉಪನ್ಯಾಸಕಿಯಾಗಿ, ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ ,ಮಂಗಳೂರು ವಿಶ್ವವಿದ್ಯಾನಿಲಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ -ಕರ್ನಾಟಕ ಗ್ರಾಮ ಪದಕೋಶ-ಯೊಜನೇಯಲ್ಲಿ ಕ್ಷೇತ್ರತಜ್ಞರಾಗಿ ಕಾರ್ಯ ನಿರ್ವಹಣೆ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ -ಜಾನಪದ ವಿಶ್ವಕೋಶ- ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ, ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ ದಯಾನಂದ ಪೈ ಮತ್ತು ಶ್ರಿ.ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೆಂದ್ರದಲ್ಲಿ ಆರು ವರ್ಷಗಳಲ್ಲಿ ಸಂಶೊಧನಾ ಅಧಿಕಾರಿಯಾಗಿ ಯಕ್ಷಗಾನಕ್ಕೆ ಸಂಬಂಧಿಸಿದ ಸಂಶೊಧನ ಯೋಜನೆ, ಪ್ರಚಾರೊಪನ್ಯಾಸ, ಸಹಯೋಗದ ಕಾರ್ಯಕ್ರಮಗಳ ಸ್ವತಂತ್ರ ನಿರ್ವಹಣೆ,ಕೃತಿ ಸಂಪಾದನೆ ಹಾಗೂ ಪ್ರಕಟಣೆ, ಕಾರ್ಯಕ್ರಮಗಳ ಸಂಯೋಜನೆ, ಪ್ರಸ್ತುತ ಕೇಂದ್ರೀಯ ವಿಶ್ವವಿದ್ಯಾಲಯ ಕಲುಬುರ್ಗಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. == ಕೃತಿಗಳು == === ಸ್ವತಂತ್ರ ಕೃತಿಗಳು === ತುಳು ಜನಪದ ಕಾವ್ಯ ೨೦೦೮ ಬೆನ್ಪಿ ಪೊಣ್ಣನ ಕನತ್ತ ಕದಿಕೆ ೨೦೦೮ ಕೃಷಿ ಸಂಸ್ಕೃತಿಯಲ್ಲಿ ಹೆಣ್ಣಿನ ಪ್ರತಿನಿಧಿಕರಣ ೨೦೧೩ ಇಹಪರ ಹಾದಿ ೨೦೧೩ === ಸಂಪಾದಿತ ಕೃತಿಗಳು === ತುಳು ಕಬಿತಗಳು ೧೯೯೬ ತಿಬಾರ ಉಳ್ಳಾಯ ಕೊಡಮಂದಾಯ ಮತ್ತು ಪರಿವಾರ ದೈವಗಳು ೨೦೧೦ ಯಕ್ಷ ಸಿರಿ ೨೦೧೨ ಯಕ್ಷ ಮುಡಿ ೨೦೧೨ ಭೂತಾರಾಧನೆಯ ಬಣ್ಣಗಾರಿಕೆ ೨೦೦೧ ಪುಟ್ಟು ಬಳಕೆಯ ಪಾಡ್ದನಗಳು ೨೦೦೪ ಅಯನ ೨೦೧೩ ಯಕ್ಷ ಕೇದಗೆ ೨೦೧೩ ಕೋಟಶಿವರಾಮ ಕಾರಂತರು ಚಿಂತನೆ ಮತ್ತು ಪ್ರಯೋಗ ೨೦೧೨ ನುಡಿ ಒಸಗೆ ೨೦೦೫ ಬಂಟ ಐಸಿರೊ ೨೦೧೨ == ಸಾಧನೆಗಳು == ತುಳು ಐಸಿರಿ(ರಿ), ಮಂಗಳೂರು -ತುಳು ಭಾಷೆ -ಸಾಹಿತ್ಯ-ಸಂಸ್ಕೃತಿ ಅಭಿವೃಧ್ದಿ ಕೂಟದಲ್ಲಿ ೨೦೦೯-೨೦೧೨ರ ವರೆಗೆ ಕಾರ್ಯದರ್ಶಿಯಾಗಿ, ೨೦೧೨ರಿಂದ ಅಧ್ಯೆಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಕರಾವಳಿ ಲೇಖಕಿ ಮತ್ತು ವಾಚಕಿಯರ ಸಂಘ ಮಂಗಳೂರು ಕರ್ನಾಟಕ ಲೇಖಕಿ ಮತ್ತು ವಾಚಕಿಯರ ಸಂಘ ಬೆಂಗಳೂರು ಭಾರತಿಯರ ಭಾಷಾ ಜಾನಪದ ಸರ್ವೆಕ್ಷಣಾ ಕೇಂದ್ರ, ಭದ್ರಾವತಿ ಜಾಗೃತಿ ಚಿಂತನ ವೇದಿಕೆ ವಿಶ್ವ ನುಡಿಸಿರಿ ಅಚಲ ಪತ್ರಿಕೆ,ಬೆಂಗಳೂರು == ಪ್ರಶಸ್ತಿಗಳು == ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ೨೦೦೧ನೇ ಸಾಲಿನ ಪುಸ್ತಕ ಬಹುಮಾನ ದೊರೆತಿವೆ == ಉಲ್ಲೇಖ ==